Munde Saagu

SAGE D

ಯಾರೇನೆ ಹೇಳಲಿ
ಮುಂದೆ ಸಾಗು ನೀ ಮುಂದೆ ಸಾಗು ನೀನು
ಬೆನ್ ಹಿಂದೆ ಮಾತನಾಡಲಿ ಮುಂದೆ ಸಾಗು ನೀ ಮುಂದೆ ಸಾಗು ನೀನು

ಬರಿ ಮಾತಾಯ್ತು ನಿಂದು
ಸರಿ ಸಾಕು ಮಾಡು ಇಂದು
ನಿನ್ನ ಕಣ್ಣ‌ ಸುತ್ತವು ಕಾಣುವುದೊಂದೆ
ಕನಸಲು ಕೂಡ ಗೆಲಬೇಕೆಂದೆ
ಅಲ್ಲ ನೀನು ಸೋಮಾರಿ
ಹೋಗಬೇಡ ಯಾಮಾರಿ
ಯಾರಪ್ಪನ ಮನೆ ಗಂಟಲ್ಲ ಮಚ್ಚ ಗೆಲುವು ಅನ್ನುವ ಸಾಧನೆ
ಒಪ್ಪೊತ್ತಿನ ಊಟ ಬಿಡೋದಾಗ್ಲಿ‌ ಮಾಡ್ ಗೆಲ್ತೀನ್ ಅನ್ನೋ ಯೋಚನೆ
ಒಂದು ಸೂಚನೆ ಪರಿವರ್ತನೆ ಆಗ್ಬೇಕು ಈಗ ನಿನ್ನಿಂದನೆ
ಸೋತಾಗ ಬರದ ಬೋಳಿಮಕ್ಳು ಈಗ ಗೆದ್ರೆ ಬರ್ತರೆ ಬೇಗನೆ
ಗೊತ್ತಲ್ವ ಮಚ್ಚ ನೀನು ಗೆದ್ರೆ ಊರು ತುಂಬ ಜಾತ್ರೆನೆ
ನಿಂಗೆ ನೀನೆ ಇಲ್ಯಾರು ಇಲ್ಲ ನಿನ್ನೋವ್ರು ಅನ್ನೋದು ಶುದ್ಧ ಸುಳ್ಳು
ಇನ್ನು ಕೂಡ ನೀನ್ ನಾಳೆ ಅನ್ಕೊಂಡು ಕೂತ್ರೆ ನಿನ್ನ ಮನೆ ಹಾಳು
ನಿನ್ನ ನೀನೆ ರೆಡಿ ಮಾಡ್ಕೋ ಬೇಗ
ಮುಂದೆ ಬರುವ ಕಷ್ಟಕೀಗ
ಸಮಸ್ಯೆ ಅನ್ನೋದು ಯಾರಿಗಿಲ್ಲ ತಲೆ ಎತ್ತಿನಿಲ್ಲು ನಿನ್ ಟೈಮ್‌ಬಂದಾಗ
Expiry date ನಿನ ಕನಸಿಗಿಲ್ಲ
ಗಟ್ಟಿ ಮಾಡ್ಕೋ ನಿನ್ನ ಮನಸ ಮೆಲ್ಲ
ಕೆಟ್ಟೋದ ಗಡಿಯಾರ ಕೂಡ ದಿನಕೆ ಎರಡ್ ಸಲ ಸರಿ ಟೈಮ್‌ ತೋರ್ಸುತಲ್ಲ
ಬಿಡು ಬಿಡು ಬಿಡು ಬಿಟ್ಟಾಕು
ನಿನ್ ಮನದ ನೋವೆಲ್ಲ ಸುಟ್ಟಾಕು
ಮೊದ್ಲು ಕಲಿ ನಿನ್ ನೀನೆ ಪ್ರೀತ್ಸೋದು
ಹೋಗೊವ್ರ್ ಹೋಗ್ಲಿ ನೀನ್ ಸ್ಟೆಪ್ ಹಾಕು

ಯಾರೇನೆ ಹೇಳಲಿ ಮುಂದೆ ಸಾಗು

ಬೆಳಿಗೆ ಎದ್ ತಕ್ಷಣ ಕೇಳುತಿನಿ ನನ್ನೆ ನಾನು
22 ಆಯ್ತು ಮಾಡಲಿಲ್ಲ ಇನ್ನು ಏನು
ಉಪವಾಸ ಮಲ್ಗಿದಿನಿ
ಒಬ್ಬೊಬ್ನೆ ಅತ್ತಿದಿನಿ
ಯಾರಿಲ್ದೆ ಬದ್ಕೋದನ್ನ 8th ಅಲ್ಲೆ ಕಲ್ತಿದಿನಿ
ಹಾ ಬಿಟ್ಟಾಕಿದಿನಿ ಬಿಟ್ಟೋದವ್ರನ್ನ
ನನ್ ಸಿಹಿ ನೆನಪನ್ನೆಲ್ಲ ಸುಟ್ಟಾಕ್ದವ್ರನ್ನ
ಭಯದ ಛಾಯೆ ನನ್ನಲಿಲ್ಲ ಈಗ I'm a fighter
ಯಾಕಂದ್ರೆ ಸಾವ್ರ ಸಲ ಸೋತು ಆಗಿದಿನಿ stronger
ಕಷ್ಟಪಟ್ಟು ಮೇಲೆ ಬರ್ತಿದಿನಿ
ಬದಲಾವಣೆ ತರ್ತಿದಿನಿ ಬಿದ್ದಿದಿನಿ
ಎದ್ದಿದಿನಿ ಗೆಲ್ಲೋದನ್ನು ಸೋತಿದಿನಿ
ನಾಳೆ‌ ಸತ್ರು ಪರ್ವಾಗಿಲ್ಲ ಇನ್ನು ಹತ್ತ್ ವರ್ಷಕ್ಕಾಗೊವಷ್ಟು ಬರ್ದಿದಿನಿ ಯೋ
ಟೀಕೆ ಪ್ರಶ್ನೆಗಳಿವೆ ನನ್ನ ಮುಂದೆ ಸಾವಿರ
ನಾನ್ ಸ್ವಲ್ಪ ಬ್ಯುಸಿ ನನ್ನ ಗೆಲುವೆ ಪ್ರಶ್ನೆಗಳಿಗೆ ಉತ್ತರ
ತತ್ತರ ನಾನ್ ಕೊಡೊ ಕೌಂಟರ್ ಗೆ ನೀ ಬಲಿಯಾಗ ಬೇಡ ನನ್ ಪದಗಳ ಎನ್ಕೌಂಟರ್ ಗೆ

ಯಾರೇನೆ ಹೇಳಲಿ ಮುಂದೆ ಸಾಗು ನೀ

ನೀ ಬಿದ್ದಾಗ ನಿನ್ನವರು ಇಲ್ಲ ಯಾರು
ನೀ ಗೆದ್ದಾಗ ನಿನ್ನವರು ಇಲ್ಲಿ ಸಾವಿರಾರು
ನೀ ಪಡುವ ಶ್ರಮವೇ ನಿನ್ನ ದೇವರು
ಕಾಯಕವೇ ಕೈಲಾಸ ನೀ ಮುಂದೆ ಸಾಗುತಿರು

ಯಾರೇನೆ ಹೇಳಲಿ ಮುಂದೆ ಸಾಗು ನೀ

Trivia about the song Munde Saagu by Sage

Who composed the song “Munde Saagu” by Sage?
The song “Munde Saagu” by Sage was composed by SAGE D.

Most popular songs of Sage

Other artists of Electro pop